ಮಹ್ಮೂದ್ ಅಹ್ಮದೀನೆಜಾದ್ (ಪರ್ಷಿಯನ್: محمود احمدی نژاد ; ಜನನ ಅಕ್ಟೋಬರ್ ೨೮ ೧೯೫೬) ಇರಾನ್ ದೇಶದ ೬ನೆಯ ಮತ್ತು ಪ್ರಸ್ತಕ ರಾಷ್ಟ್ರಪತಿ. ಇವರು ೨೦೦೫ರ ಚುನಾವಣೆಯ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದರು. ನಂತರ ೨೦೦೯ರಲ್ಲಿ ನಡೆದ ವಿವಾದಿತ ಚುನಾವಣೆಯಲ್ಲೂ ಸಹ ಚುನಾಯಿತರಾದರು. ರಾಷ್ಟ್ರಪತಿಯಾಗುವ ಮುನ್ನ ಇವರು ತೆಹ್ರಾನ್‍ನ ಮೇಯರ್ ಮತ್ತು ಇರಾನಿನ ಅರ್ದಾಬಿಲ್ ಪ್ರಾಂತ್ಯದ ಗವರ್ನರ್ ಜನರಲ್ ಆಗಿದ್ದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಇರಾನಿನ ರಾಷ್ಟ್ರಪತಿಯ ಅಧಿಕೃತ ಅಂತರಜಾಲ ತಾಣ ರಾಷ್ಟ್ರಪತಿ ಅಹ್ಮದೀನೆಜಾದ್‍ರವರ ಬ್ಲಾಗ್ 2007-10-03 ವೇಬ್ಯಾಕ್ ಮೆಷಿನ್ ನಲ್ಲಿ.